ಬುಧವಾರ, ಸೆಪ್ಟೆಂಬರ್ 26, 2018

ಸಂಪಾದಕ ಮಂಡಳಿ   

ಗೌರವ ಸಂಪಾದಕರು : 
ಎಸ್.ಆರ್.ಕುಮಾರಸ್ವಾಮಿ
ಸಂಪಾದಕರು : 
ಶ್ರೀ ಶ್ರೀಪಾದ ಬಿಚ್ಚುಗತ್ತಿ
ಸಂಪಾದಕ ಮಂಡಳಿ :
ಶ್ರೀ ಶಿವಾನಂದಪಾಣಿ 
ಶ್ರೀ ಯು.ಎಂ.ನಟರಾಜ್, 
ಶ್ರೀ ಉಮೇಶ್ ಬಿಚ್ಚುಗತ್ತಿ, 
ಶ್ರೀ ಹೆಚ್.ಕೆ.ಬಿ.ಸ್ವಾಮಿ, 
ಶ್ರೀ ಎಂ.ಸೈಯದ್ ಅನ್ಸರ್ 
ವಿನ್ಯಾಸ: ರಾಘವೇಂದ್ರ ಬಾಪಟ್
ರಾಜೇಂದ್ರಜೈನ್

ಶುಕ್ರವಾರ, ಫೆಬ್ರವರಿ 7, 2014

ಅಧ್ಯಕ್ಷರ ಮಾತು 

 ಸೊರಬದ ಸಮಸ್ತ ಕನ್ನಡಿಗರಿಗೆ ಸಾಹಿತ್ಯ ಪರಿಷತ್ತಿನ ವತಿಯಿಂದ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತಾ ಈ ಸಂದರ್ಭದಲ್ಲಿ ಸುಮಧುರ ಸುವಾಸನೆಯನ್ನು ನಿಮಗೆ ನೀಡಲು ನನಗೆ ತುಂಬಾ ಸಂತೋಷವಾಗಿದೆ. ಅದುವೇ ಸಾಹಿತ್ಯ ಸುಗಂಧ. ಸಾಹಿತ್ಯ ಸುಗಂಧ ಇದು ನಮ್ಮ ಬಹುದಿನದ ಕನಸು. ಸಾಹಿತ್ಯ ಮನಸುಗಳ ನನಸು. ಬಹುದಿನಗಳಿಂದ ಸ್ನೇಹಿತರೊಡಗೂಡಿ ಒಂದು ಉತ್ತಮ ಸದಭಿರುಚಿ ಪತ್ರಿಕೆಯನ್ನು ಹೊರತರಲು ನಡೆಸಿದ ಪ್ರಯತ್ನ ಇಷ್ಟು ದಿನಗಳ ಕಾಲ ಪ್ರಯತ್ನವಾಗಿಯೇ ಉಳಿದಿತ್ತು. ನಮ್ಮ ಸಂಪದ್ಭರಿತ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸಾಹಿತಿಗಳು, ಕಲಾವಿದರು ಹೇರಳವಾಗಿದ್ದು ಉತ್ತಮ ಹೆಸರನ್ನು ಗಳಿಸಿರುತ್ತಾರೆ. ಆದರೆ ದುಃಖದ ಸಂಗತಿಯೆಂದರೆ ನಮ್ಮ ಸೊರಬ ತಾಲ್ಲೂಕು ಕಲಾವಿದರುಗಳಿಂದ ತುಂಬಿ ತುಳುಕುತ್ತಿದ್ದರೂ ಉತ್ತಮ ಸಾಹಿತಿಗಳು, ಬರಹಗಾರರು ಹೊರಹೊಮ್ಮಲು ಸಾಧ್ಯವಿದ್ದರೂ ಅದೇಕೋ ಈ ರಂಗದಲ್ಲಿ ಹೆಸರು ಮಾಡಿದವರು ಬಹಳ ವಿರಳ. ಈ ನಿಟ್ಟಿನ ಚಿಂತನೆಯಲ್ಲಿ ನಮ್ಮವರು ಮುಗ್ಧರು, ಸಂಕೋಚ ಸ್ವಭಾವದವರು. ಲಭ್ಯವಿರುವ ಅವಕಾಶವನ್ನು ಬಳಸಿಕೊಳ್ಳಲು ವಿಫಲರಾಗಿರುವುದು ಕಂಡು ಬಂದ ಕೊರತೆಯಾಗಿದೆ. ತಾಲ್ಲೂಕಿನಲ್ಲಿ ಕಂಡ ಕೊರತೆಯನ್ನು ನೀಗಿಸುವ ಉದ್ದೇಶದಿಂದ ನಮ್ಮಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಸೃಷ್ಟಿಸಿ ಅವರಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ನಮ್ಮ ಮಧ್ಯೆ ಇರುವ ನಮ್ಮವರೇ ಆಗಿರುವ ಪ್ರತಿಭೆಗಳನ್ನು ಸೊರಬದ ಸಮಸ್ತ ಜನತೆಗೆ ಪರಿಚಯಿಸುವುದರೊಂದಿಗೆ ಸಾಹಿತ್ಯಾಸಕ್ತಿಯನ್ನು ಬೆಳೆಸಲು ಕನ್ನಡದ ಸುಗಂಧವನ್ನು ಪಸರಿಸಲು ಸ್ನೇಹಿತರೊಡಗೂಡಿದ ಸಾಹಿತ್ಯ ಪರಿಷತ್ತಿನ ಚಿಕ್ಕ ಪ್ರಯತ್ನ ಇದು. ಈ ನಮ್ಮ ಪ್ರಾಮಾಣಿಕ ಪ್ರಯತ್ನವನ್ನು ಸೊರಬದ ಕನ್ನಡ ಸಾಹಿತ್ಯಾಸಕ್ತರು ಪ್ರೋತ್ಸಾಹ ನೀಡಿ ಕನ್ನಡದ ಸೇವೆಗೆ ಅವಕಾಶ ಮಾಡಿಕೊಡುತ್ತೀರೆಂದು ನಮ್ಮ ಕನಸು-ನನಸಿನ ಈ ಪತ್ರಿಕೆಯನ್ನು ತಮ್ಮ ಮುಂದಿಡುತ್ತಿದ್ದೇವೆ.
 - ಎಸ್.ಆರ್.ಕುಮಾರ್ಸ್ವಾಮಿ, ಅಧ್ಯಕ್ಷರು